Assignment 9
ಲೇಖನ
ಶಾಲೆ ಹೆಸರು: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹೊಳಲು
ಶಿಕ್ಷಕರ ಹೆಸರು: ಶ್ರೀಮತಿ ಲೀಲಾ ಎಂ ಬಸವನಾಳಮಠ
ಅಸೈನ್ಮೆಂಟ್ -9
ವಿಷಯ:~ಸದರಿ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ.
ಶಿಕ್ಷಕ ನಿರಂತರ ವಿದ್ಯಾರ್ಥಿ ಎಂಬಂತೆ ಶಿಕ್ಷಕನು ತನ್ನ ಜೀವನದುದ್ದಕ್ಕೂ ಕ್ರಿಯಾಶೀಲನಾಗಿ ಓದಿನಲ್ಲಿ ತೊಡಗಿರಬೇಕಾಗುತ್ತದೆ ಯಾವುದೇ ಕಾರ್ಯದಲ್ಲಿರಲಿ ನನ್ನ ಬೋಧನೆಗೆ ಮಕ್ಕಳಿಗೆ ಅನುಕೂಲವಾಗುವುದೇನೋ ಎಂದು ವಿಚಾರ ಬರುತ್ತದೆ .ನಾನು ಸದಾ ಪತ್ರಿಕೆಗಳನ್ನು ಓದುವುದು ,ರೇಡಿಯೋ ಆಲಿಸುವುದು, ಪ್ರಚಲಿತ ವಿಷಯಗಳನ್ನು ತಿಳಿದುಕೊಳ್ಳುವುದು ಅದನ್ನು ಮಕ್ಕಳಿಗೆ ತಿಳಿಸುವುದು, ಹೊಸ ಹೊಸ ಹಾಡು, ಕಥೆ ಕಲಿಯುವುದು. ಅದನ್ನು ಕಲಿಕೆಯಲ್ಲಿ ತೊಡಗಿಸುವುದು, ಕಲಿಕೆಗೆ ಪೂರಕವಾಗುವ ಚಾರ್ಟ್ ಗಳನ್ನು ಅಕ್ಷರಗಳನ್ನು ಮತ್ತು ಅಂಕಿಗಳನ್ನು ಇಂಗ್ಲಿಷ್ ಅಕ್ಷರಗಳನ್ನು ಆಕರ್ಷಕವಾಗಿ ಬೇರೆಬೇರೆ ರೀತಿಯಲ್ಲಿ ಬರೆದು ಓದಲು ಆಸಕ್ತಿ ಬರುವಂತೆ ಮಾಡುವುದು. ಮತ್ತು ಜಾಣ ಮಕ್ಕಳಷ್ಟೇ ಅಲ್ಲದೆ ತರಗತಿಯಲ್ಲಿರುವ ಎಲ್ಲಾ ಮಕ್ಕಳು ಒಂದೇ ರೀತಿ ಯಾಗಿರುವಂತೆ ಪ್ರಯತ್ನಿಸುವುದೇ ನನ್ನ ಗುರಿಯಾಗಿದೆ.
ನನಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಂಡು ಹೊಸಹೊಸ ಪ್ರಯೋಗಗಳನ್ನು ಅಕ್ಷರಾಭ್ಯಾಸದ ಹಂತಗಳನ್ನು ತುಂಬಾ ಹಗುರವಾಗಿ ಬರೆಯುವ ವಿಧಾನವನ್ನು ತಿಳಿದು ಮಗುವಿನಿಂದ ಮಾಡಿಸುವುದು. ನೀತಿಕಥೆಗಳನ್ನು ಮಕ್ಕಳಿಗೆ ಹೇಳುವುದುಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸುವುದು , ಯೂಟ್ಯೂಬ್ ವೀಕ್ಷಿಸುವುದು, ಕೇಳಿ ಕಲಿ ನೋಡಿ ಕಲಿ ಆಡುತ್ತ ಕಲಿಯುವುದೆಂದರೆ ಮಕ್ಕಳಿಗೆ ತುಂಬಾನೇ ಪ್ರೀತಿ ತುಂಬಾ ಆಸಕ್ತಿದಾಯಕವಾಗಿ ಹೊಸತನದೊಂದಿಗೆ ಉತ್ಸುಕರಾಗಿರುತ್ತಾರೆ.
ಬೋಧಿಸುವುದು ಒಂದು ಕಲೆ ಅದಕ್ಕೆ ತಾಳ್ಮೆ ಪಾಂಡಿತ್ಯ ವಿಷಯ ಸಂಗ್ರಹಣೆ ಪ್ರಮುಖವಾಗಿ ಶುದ್ಧ ಮತ್ತು ಸ್ಪಷ್ಟ ಧ್ವನಿಯಲ್ಲಿ ಏರಿಳಿತ ದೊಂದಿಗೆ ಬೋಧಿಸುವವನು ಉತ್ತಮ ಶಿಕ್ಷಕ ನಾಗಿರುತ್ತಾನೆ.
ಸಾಮಾನ್ಯ ದಿನಗಳಲ್ಲಿ ಮಕ್ಕಳೊಡನೆ ದೈನಂದಿನ ಒಡನಾಟದಿಂದ ಕೂಡಿರುತ್ತಿತ್ತು. ಆದರೆ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮನೆಯಲ್ಲಿ ಇರುವುದು ಉಚಿತ ಅಲ್ಲವೇ .? ಶಿಕ್ಷಕನಿಗೆ ಆತನ ವೃತ್ತಿ ನೈಪುಣ್ಯತೆಯ ಒಂದು ಕಿರೀಟವಿದ್ದಂತೆ.
" ಸರ್ವಜ್ಞ ಎಂಬುವನು ಗರ್ವದಿಂದಾದವನೇ
ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ "
ಹಾಗೆಯೇ ಶಿಕ್ಷಕ "IDLE MIND IS DEVIL'S WORKSHOP"ಎಂಬಂತೆ ಸುಮ್ಮನೆ ಕುಳಿತರೆ ನಾವು ಕಲಿತ ವಿದ್ಯೆ ಮರೆಯುತ್ತದೆ ಆದಕಾರಣ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ನಾನು ಸಹ ಮಕ್ಕಳಿಗೆ ಕಲಿಯಲು ಸರಳ ವಾಗಲಿ ಎಂದು ಬೋಧನೋಪಕರಣಗಳನ್ನು ತಯಾರಿಸುತ್ತಿರುವ ಸಣ್ಣ ಸಣ್ಣ ಕಥೆಗಳನ್ನು, ನಾಟಕಗಳನ್ನು, ಶಿಶು ಗೀತೆಗಳುನ್ನು ಸಂಗ್ರಹಿಸುತ್ತಿರುವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ (covid-19) ಮಕ್ಕಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುವುದು, ಮಕ್ಕಳನ್ನು ಮತ್ತು ಅವರ ಮನೆಯವರ ಯು ಕ್ಷೇಮವನ್ನು ವಿಚಾರಿಸುವುದು ಅವರ ಸುರಕ್ಷತೆಯ ಕ್ರಮವನ್ನು ತಿಳಿಸುವುದು, ಎಚ್ಚರಿಕೆಯಿಂದ ಇರಲು ಹೇಳುವುದು,ಮನೆಯಲ್ಲಿಯೇ ಕುಳಿತು ಕಲಿತ ವಿಷಯವನ್ನು ಮತ್ತು ಗೊತ್ತಿಲ್ಲದ ಮರೆತ ವಿಷಯವನ್ನು ಮನನ ಮಾಡುವುದಾಗಿ ಹೇಳುವುದು .
COVID--19 ಸಂದರ್ಭದಲ್ಲಿ ವಿವಿಧ ಶಿಕ್ಷಣತಜ್ಞರ ಇಲಾಖೆಯ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು online ತರಬೇತಿ ಪಡೆಯಲು ತರಬೇತಿಗೆ ಭಾಗವಹಿಸುವುದು. ನಲಿಕಲಿ ತರಬೇತಿಗಳನ್ನು ಪಡೆದಿರುವ, ನಲಿ ಕಲಿ ಗೆ ಸಂಬಂಧಿಸಿದ TLM ಗಳನ್ನು ಬಳಸುವ ಬೋಧಿಸುವ ವಿಧಾನವನ್ನು ತಿಳಿಯುವೆ . ಮೊಬೈಲ್ ಕರೆ ಮಾಡಿ ಮಕ್ಕಳು ಅಭ್ಯಾಸದಲ್ಲಿ ತೊಡಗಿರುವಂತೆ ಮಾಡುವುದು.ಇದರಿಂದ ಮಕ್ಕಳು ನಿರಂತರ ಕಲಿಕೆಯಲ್ಲಿ ತೊಡಗುವಂತೆ ನೋಡುವುದು.

Comments
Post a Comment