ಲೇಖನ ಶಾಲೆ ಹೆಸರು: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹೊಳಲು ಶಿಕ್ಷಕರ ಹೆಸರು: ಶ್ರೀಮತಿ ಲೀಲಾ ಎಂ ಬಸವನಾಳಮಠ ಅಸೈನ್ಮೆಂಟ್ -9 ವಿಷಯ:~ಸದರಿ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ. ಶಿಕ್ಷಕ ನಿರಂತರ ವಿದ್ಯಾರ್ಥಿ ಎಂಬಂತೆ ಶಿಕ್ಷಕನು ತನ್ನ ಜೀವನದುದ್ದಕ್ಕೂ ಕ್ರಿಯಾಶೀಲನಾಗಿ ಓದಿನಲ್ಲಿ ತೊಡಗಿರಬೇಕಾಗುತ್ತದೆ ಯಾವುದೇ ಕಾರ್ಯದಲ್ಲಿರಲಿ ನನ್ನ ಬೋಧನೆಗೆ ಮಕ್ಕಳಿಗೆ ಅನುಕೂಲವಾಗುವುದೇನೋ ಎಂದು ವಿಚಾರ ಬರುತ್ತದೆ .ನಾನು ಸದಾ ಪತ್ರಿಕೆಗಳನ್ನು ಓದುವುದು ,ರೇಡಿಯೋ ಆಲಿಸುವುದು, ಪ್ರಚಲಿತ ವಿಷಯಗಳನ್ನು ತಿಳಿದುಕೊಳ್ಳುವುದು ಅದನ್ನು ಮಕ್ಕಳಿಗೆ ತಿಳಿಸುವುದು, ಹೊಸ ಹೊಸ ಹಾಡು, ಕಥೆ ಕಲಿಯುವುದು. ಅದನ್ನು ಕಲಿಕೆಯಲ್ಲಿ ತೊಡಗಿಸುವುದು, ಕಲಿಕೆಗೆ ಪೂರಕವಾಗುವ ಚಾರ್ಟ್ ಗಳನ್ನು ಅಕ್ಷರಗಳನ್ನು ಮತ್ತು ಅಂಕಿಗಳನ್ನು ಇಂಗ್ಲಿಷ್ ಅಕ್ಷರಗಳನ್ನು ಆಕರ್ಷಕವಾಗಿ ಬೇರೆಬೇರೆ ರೀತಿಯಲ್ಲಿ ಬರೆದು ಓದಲು ಆಸಕ್ತಿ ಬರುವಂತೆ ಮಾಡುವುದು. ಮತ್ತು ಜಾಣ ಮಕ್ಕಳಷ್ಟೇ ಅಲ್ಲದೆ ...